ಒಂದು ರಾಜ್ಯದ ಎಸ್ಸಿ/ಎಸ್ಟಿ ವ್ಯಕ್ತಿ ಮತ್ತೊಂದು ರಾಜ್ಯದಲ್ಲಿ ಎಸ್ಸಿ/ಎಸ್ಟಿ ಆಗಿರಬೇಕೆಂದಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಆ.30: ಒಬ್ಬ ವ್ಯಕ್ತಿಯು ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿಯವನೆಂದು ಗುರುತಿಸಲಾಗಿದ್ದರೆ ಇದೇ ಆಧಾರದಲ್ಲಿ ಆತ ಇನ್ನೊಂದು ರಾಜ್ಯದಲ್ಲಿ ತಾನು ಪರಿಶಿಷ್ಟ ಜಾತಿಯ ವ್ಯಕ್ತಿ ಎಂದು ಹೇಳಿಕೊಳ್ಳುವಂತಿಲ್ಲ. ಬೇರೆ ರಾಜ್ಯದಲ್ಲಿ ಆತನ ಜಾತಿಯು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರದಿದ್ದಲ್ಲಿ ಆತ/ಆಕೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಕೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಉದ್ಯೋಗ ಅಥವಾ ಶಿಕ್ಷಣದ ಉದ್ದೇಶದಿಂದ ಬೇರೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಿದ್ದರೆ ಆತನನ್ನು ಆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂದು ಹೇಳಲಾಗದು" ಎಂದು ಜಸ್ಟೀಸ್ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ.
Next Story