ಕಾಶ್ಮೀರ: ಮನೆಗೆ ನುಗ್ಗಿ 5 ಪೊಲೀಸರ ಕುಟುಂಬ ಸದಸ್ಯರನ್ನು ಅಪಹರಿಸಿದ ಉಗ್ರರು
ಶ್ರೀನಗರ, ಆ.31: ದಕ್ಷಿಣ ಕಾಶ್ಮೀರದಲ್ಲಿ ಪೊಲೀಸರ ಮನೆಗೆ ನುಗ್ಗಿದ ಭಯೋತ್ಪಾದಕರು ಐವರು ಪೊಲೀಸ್ ಅಧಿಕಾರಿಗಳ ಕುಟುಂಬ ಸದಸ್ಯರನ್ನು ಅಪಹರಿಸಿರುವ ಘಟನೆ ನಡೆದಿದೆ.
ಭಯೋತ್ಪಾದಕರ ಮನೆಗೆ ನುಗ್ಗಿದ್ದ ಭದ್ರತಾ ಸಿಬ್ಬಂದಿ ಅವರ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದ ನಂತರ ಭಯೋತ್ಪಾದಕರು ಈ ಕೃತ್ಯ ಎಸಗಿದ್ದಾರೆ. ಗುರುವಾರ ಪುಲ್ವಾಮ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಅಪಹರಿಸಲಾಗಿತ್ತು. ನಂತರ ಹಲ್ಲೆ ನಡೆಸಿ ಅವರನ್ನು ಬಿಡುಗಡೆಗೊಳಿಸಲಾಗಿತ್ತು.
ಆನಂತರ ಪುಲ್ವಾಮ, ಅನಂತ್ ನಾಗ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿರುವ ಪೊಲೀಸರ ಮನೆಗೆ ನುಗ್ಗಿದ ಉಗ್ರರು ಕುಟುಂಬ ಸದಸ್ಯರನ್ನು ಅಪಹರಿಸಿದ್ದಾರೆ.
Next Story