ಐಡಿಯಾದೊಂದಿಗೆ ವಿಲೀನವಾದ ವೊಡಾಫೋನ್
ಹೊಸದಿಲ್ಲಿ, ಆ.31: ಎರಡು ಪ್ರಮುಖ ದೂರಸಂಪರ್ಕ ಸಂಸ್ಥೆಗಳಾದ ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಇಂಡಿಯಾಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದ್ದು,ಇದರೊಂದಿಗೆ ಹೊಸದಾಗಿ ಸೃಷ್ಟಿಯಾಗಿರುವ ವೊಡಾಫೋನ್ ಐಡಿಯಾ ಲಿ. 408 ಮಿ.ಚಂದಾದಾರರ ಬಲದೊಂದಿಗೆ ದೇಶದ ಅತ್ಯಂತ ದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆಯಾಗಿ ಹೊರಹೊಮ್ಮಿದೆ.
ನೂತನ ಕಂಪನಿಯು 12 ನಿರ್ದೇಶಕರನ್ನೊಳಗೊಂಡ ಆಡಳಿತ ಮಂಡಳಿಯನ್ನು ಹೊಂದಿದ್ದು, ಕುಮಾರ ಮಂಗಲಂ ಬಿರ್ಲಾ ಅವರು ಅಧ್ಯಕ್ಷರಾಗಿದ್ದಾರೆ. ಬಾಲೇಶ ಶರ್ಮಾ ಅವರು ಸಿಇಒ ಆಗಿ ನೇಮಕಗೊಂಡಿದ್ದಾರೆ.
ವಿಲೀನದೊಂದಿಗೆ ವೊಡಾಫೋನ್ ಐಡಿಯಾ ಭಾರತದ ಮಾರುಕಟ್ಟೆಯಲ್ಲಿ ಶೇ.32.2ರಷ್ಟು ಪಾಲನ್ನು ಹೊಂದಿದ್ದು,ಒಂಭತ್ತು ದೂರಸಂಪರ್ಕ ವಲಯಗಳಲ್ಲಿ ನಂ.1 ಸ್ಥಾನಕ್ಕೇರಿದೆ. ಇದರೊಂದಿಗೆ ದೇಶದ ಅತ್ಯಂತ ದೊಡ್ಡ ದೂರಸಂಪರ್ಕ ಕಂಪನಿ ಎಂಬ ಹೆಗ್ಗಳಿಕೆಯಿಂದ ಏರ್ಟೆಲ್ ವಂಚಿತಗೊಳ್ಳಲಿದೆ. ವೊಡಾಫೋನ್ ಮತ್ತು ಐಡಿಯಾ ಎರಡೂ ಬ್ರಾಂಡ್ಗಳು ಮುಂದುವರಿಯಲಿವೆ ಎಂದು ಕಂಪನಿಯು ತಿಳಿಸಿದೆ.
Next Story