ಮೋದಿ ಪ್ರಧಾನಿಯಾಗುವುದು ಎನ್ ಡಿಎಯಲ್ಲಿರುವ ಹಲವರಿಗೆ ಇಷ್ಟವಿಲ್ಲ: ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ
ಪಾಟ್ನಾ, ಆ.31: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಎನ್ ಡಿಎಯಲ್ಲಿರುವ ಹಲವರಿಗೆ ಇಷ್ಟವಿಲ್ಲ ಎಂದು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ಹೇಳಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಸೀಟು ಹಂಚಿಕೆ ವಿಷಯದಲ್ಲಿ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷವು ಎನ್ ಡಿಎ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದೆ.
“ಎನ್ ಡಿಎಯಲ್ಲಿರುವ ಹಲವರಿಗೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಇಷ್ಟವಿಲ್ಲ. ನಾನು ಜವಾಬ್ದಾರಿಯುತವಾಗಿ ಈ ಹೇಳಿಕೆ ನೀಡುತ್ತಿದ್ದೇನೆ ಎಂದವರು ಹೇಳಿದರು.
Next Story