ಭಾರತ ಮುಖ್ಯ ನ್ಯಾಯಾಧೀಶರಾಗಲು ಜಸ್ಟಿಸ್ ರಂಜನ್ ಗೊಗೋಯ್ ಸಜ್ಜು
ಹೊಸದಿಲ್ಲಿ, ಸೆ.1: ಜಸ್ಟಿಸ್ ರಂಜನ್ ಗೊಗೋಯ್ ಭಾರತದ ನೂತನ ಮುಖ್ಯ ನ್ಯಾಯಾಧೀಶ ಹುದ್ದೆಗೇರಲು ಸಜ್ಜಾಗಿದ್ದಾರೆ.
ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕೇಂದ್ರ ಸರಕಾರಕ್ಕೆ ಗೊಗೋಯ್ ಹೆಸರನ್ನು ಮುಖ್ಯ ನ್ಯಾಯಾಧೀಶ ಹುದ್ದೆಗೆ ಶಿಫಾರಸು ಮಾಡಿದ್ದಾರೆ.
ಜಸ್ಟಿಸ್ ಗೊಗೋಯ್ ಅ.3 ರಂದು ಪ್ರತಿಷ್ಞಾವಿಧಿ ಸ್ವೀಕರಿಸುವ ಸಾಧ್ಯತೆಯಿದೆ. ಈ ಮೊದಲು ಕಾನೂನು ಸಚಿವಾಲಯ ತನ್ನ ಉತ್ತರಾಧಿಕಾರಿಯ ಹೆಸರನ್ನು ಸೂಚಿಸುವಂತೆ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ಅವರಿಗೆ ಅಧಿಕೃತ ಪತ್ರ ಬರೆದಿತ್ತು. ಸುಪ್ರೀಂಕೋರ್ಟ್ನ ಹಿರಿಯ ನ್ಯಾಯಾಧೀಶರನ್ನು ಮುಖ್ಯ ನ್ಯಾಯಾಧೀಶರಾಗಿ ಆಯ್ಕೆ ಮಾಡಲಾಗುತ್ತದೆ.
Next Story