ಮೇಜರ್ ಗೊಗೋಯ್ ಪ್ರಕರಣ: ಹೆಚ್ಚುವರಿ ತನಿಖೆಗೆ ಜಮ್ಮುಕಾಶ್ಮೀರ ನ್ಯಾಯಾಲಯ ಆದೇಶ
ಶ್ರೀನಗರ, ಸೆ. 1: ಸೇನಾಧಿಕಾರಿ ಮೇಜರ್ ಲೀತುಲ್ ಗೋಗೋಯ್ ಮಹಿಳೆಯ ಜೊತೆಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ತನಿಖೆಗೆ ಸ್ಥಳೀಯ ನ್ಯಾಯಾಲಯ ಪೊಲೀಸರಿಗೆ ಶನಿವಾರ ನಿರ್ದೇಶಿಸಿದೆ ಹಾಗೂ ಸೆಪ್ಟಂಬರ್ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಅರ್ಜಿಯ ಅಂಶ ಹಾಗೂ ಸಂಬಂಧಿತ ಪೊಲೀಸ್ ಠಾಣೆ ಸಲ್ಲಿಸಿದ ವರದಿಯ ನಿಲುವು ಗಮನದಲ್ಲಿ ಇರಿಸಿ ಈ ಪ್ರಕರಣದ ಇನ್ನಷ್ಟು ತನಿಖೆ ಅಗತ್ಯತೆ ಇದೆ ಎಂದು ಪರಿಗಣಿಸಿದ್ದೇನೆ ಎಂದು ಶ್ರೀನಗರದ ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿದೆ. ನ್ಯಾಯ ಹಾಗೂ ಮಾನವ ಹಕ್ಕುಗಳಿಗಿರುವ ಅಂತಾರಾಷ್ಟ್ರೀಯ ವೇದಿಕೆಯ ಅಧ್ಯಕ್ಷ ಮುಹಮ್ಮದ್ ಅಹ್ಸಾನ್ ಉಂಟೂ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಸಿಜೆಎಂ, ಸೆಪ್ಟಂಬರ್ 18ರ ಒಳಗೆ ವಿಸ್ತೃತ ವರದಿ ಸಲ್ಲಿಸಬೇಕು ಎಂದು ಖನ್ಯಾರ್ ಪೊಲೀಸ್ ಠಾಣೆಯ ಅಧಿಕಾರಿಗೆ ನಿರ್ದೇಶಿಸಿದೆ.
Next Story