2007ರ ಹೈದರಾಬಾದ್ ಸ್ಪೋಟ ಪ್ರಕರಣ: ಇಬ್ಬರು ದೋಷಿಗಳು
ಹೊಸದಿಲ್ಲಿ, ಸೆ.4: ಹೈದರಾಬಾದ್ ನಲ್ಲಿ 2007ರಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಇಬ್ಬರು ದೋಷಿಗಳು ಎಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ತೀರ್ಪಿತ್ತಿದೆ. ಈ ಸ್ಫೋಟದಲ್ಲಿ 44 ಮಂದಿ ಮೃತಪಟ್ಟಿದ್ದು, 68 ಮಂದಿ ಗಾಯಗೊಂಡಿದ್ದಾರೆ.
ಏಳು ಆರೋಪಿಗಳ ಪೈಕಿ ಅನೀಕ್ ಶಫೀಕ್ ಮತ್ತು ಮುಹಮ್ಮದ್ ಅಕ್ಬರ್ ಇಸ್ಮಾಯೀಲ್ ದೋಷಿಗಳು ಎಂದು ನ್ಯಾಯಾಲಯ ತೀರ್ಪಿತ್ತಿದ್ದು, ಉಳಿದವರನ್ನು ಖುಲಾಸೆಗೊಳಿಸಿದೆ.
Next Story