ಕೇರಳ ಸಿಪಿಎಂ ಶಾಸಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಪಾಲಕ್ಕಾಡ್, ಸೆ.4: ಶೋರ್ನೂರ್ ಸಿಪಿಎಂ ಶಾಸಕ ಪಿ.ಕೆ. ಶಶಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಯಾವ ತನಿಖೆಗೂ ತಾನು ಸಿದ್ಧ ಎಂದು ಶಶಿ ಹೇಳಿದ್ದಾರೆ.
ಮಾಧ್ಯಮಗಳ ಮೂಲಕ ತನ್ನ ವಿರುದ್ಧ ದೂರುಗಳಿರುವ ಬಗ್ಗೆ ತಿಳಿಯಿತು. ಸಿಪಿಎಂ ತನಿಖೆ ನಡೆಸಲಿ. ಈ ಪ್ರಕರಣದಲ್ಲಿ ಪಕ್ಷವು ತನಿಖೆ ನಡೆಸಲಿದೆ ಎಂದು ಶಾಶಕ ಶಶಿ ಹೇಳಿದ್ದಾರೆ.
ರಾಜಕೀಯ ಸಂಚು ಇದು. ತನ್ನ ರಾಜಕೀಯ ಜೀವನದಲ್ಲಿ ಇಂತಹ ಆರೋಪವನ್ನು ಇದೇ ಮೊದಲ ಸಲ ಕೇಳುತ್ತಿದ್ದೇನೆ. ರಾಜಕೀಯ ಜೀವನವನ್ನು ನಾಶಪಡಿಸಲು ಯತ್ನಿಸುತ್ತಿರುವವರು ಈ ಸಂಚಿನ ಹಿಂದೆಯಿದ್ದಾರೆ ಎಂದು ಅವರು ಹೇಳಿದ್ದಾರೆ.
ಶಾಸಕರ ವಿರುದ್ಧ ಡಿವೈಎಫ್ಐ ಮಹಿಳಾ ನಾಯಕಿಯೊಬ್ಬರು ದೂರು ನೀಡಿದ್ದಾರೆ. ಮಣ್ಣಾರ್ಕ್ಕಾಡ್ ಪಾರ್ಟಿ ಕಚೇರಿಯಲ್ಲಿ ಶಾಸಕ ಶಶಿ ತನಗೆ ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ರಿಗೆ ದೂರು ನೀಡಲಾಗಿದೆ.
Next Story