ಕೊಲ್ಕತ್ತಾದಲ್ಲಿ ಕುಸಿದ ಫ್ಲೈ ಓವರ್ ; ಓರ್ವ ಸಾವು
ಕೊಲ್ಕತ್ತಾ, ಸೆ.4: ಪಶ್ಚಿಮ ಬಂಗಾಳದ ಕೊಲ್ಕತ್ತಾದ ತಾರಾತಲ ಬಳಿಯ ಮಜೇರ್ ಹಾಟ್ ನಲ್ಲಿ ಮೇಲ್ಸೇತುವೆ ಮಂಗಳವಾರ ಮಧ್ಯಾಹ್ನ ಕುಸಿದು ಬಿದ್ದ ಪರಿಣಾಮವಾಗಿ ಮೇಲ್ಸೇತುವೆಯ ಅವಶೇಷಗಳಡಿ ಸಿಲುಕಿಕೊಂಡು ಓರ್ವ ಮೃತಪಟ್ಟು, 9 ಮಂದಿ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.
ಮೇಲ್ಸೇತುವೆಯ ಆವಶೇಷಗಳಡಿ ಹಲವು ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 3 ವಾಹನಗಳು ಅವಘಡದಲ್ಲಿ ಜಖಂಗೊಂಡಿವೆ. ಅಗ್ನಿ ಶಾಮಕ ದಳ, ಎನ್ ಡಿ ಆರ್ ಎಫ್ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
Next Story