ಪಾತಾಳಕ್ಕೆ ಕುಸಿದ ರೂಪಾಯಿ: ಸತತ ಆರನೇ ದಿನವೂ ಇಳಿದ ಸೆನ್ಸೆಕ್ಸ್
ಮುಂಬೈ,ಸೆ.5: ಅಮೆರಿಕದ ಡಾಲರ್ನೆದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ ಮತ್ತು ದುರ್ಬಲ ಜಾಗತಿಕ ಪ್ರವೃತ್ತಿಯಿಂದಾಗಿ ಮುಂಬೈ ಶೇರು ವಿನಿಮಯ ಕೇಂದ್ರ (ಬಿಎಸ್ಇ)ದ ಸೂಚ್ಯಂಕ ಸತತ ಆರನೇ ದಿನವಾದ ಬುಧವಾರವೂ ಇಳಿಕೆಯನ್ನು ಕಂಡಿದೆ. ದಿನದಂತ್ಯಕ್ಕೆ 140 ಅಂಕಗಳ ಕುಸಿತದೊಂದಿಗೆ 39,018.31ಕ್ಕೆ ಮುಕ್ತಾಯಗೊಂಡಿದೆ. ಇದೇ ವೇಳೆ ರೂಪಾಯಿ ದಿನದ ಮಧ್ಯಂತರ ವಹಿವಾಟಿನಲ್ಲಿ ಡಾಲರ್ನೆದುರು 71.96ಕ್ಕೆ ಕುಸಿದು ಹೊಸ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ.
ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್ಎಸ್ಇ)ದ ಸೂಚ್ಯಂಕ ನಿಫ್ಟಿ 43.45 ಅಂಕಗಳನ್ನು ಕಳೆದುಕೊಂಡು 11,476.95ರಲ್ಲಿ ಮುಕ್ತಾಯಗೊಂಡಿದೆ.
Next Story