ಪಶ್ಚಿಮಬಂಗಾಳದಲ್ಲಿ ಇನ್ನೊಂದು ಸೇತುವೆ ಕುಸಿತ
ಸಿಲಿಗುರಿ, ಸೆ. 7: ಕೋಲ್ಕತ್ತಾದ ಹೊರವಲಯದ ಮಜೇರ್ ಹಾತ್ನಲ್ಲಿ 50 ವರ್ಷಕ್ಕೂ ಅಧಿಕ ಹಳೆಯ ಸೇತುವೆ ಕುಸಿದು ಮೂರು ಮಂದಿ ಮೃತಪಟ್ಟ ಮೂರು ದಿನಗಳ ಬಳಿಕ ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿ ಸಮೀಪ ಇನ್ನೊಂದು ಸೇತುವೆ ಶುಕ್ರವಾರ ಕುಸಿದಿದೆ.
ಉತ್ತರಬಂಗಾಳದ ಪ್ರಮುಖ ನಗರವಾಗಿರುವ ಸಿಲಿಗುರಿ ಹಾಗೂ ಮಹಾನ್ಗಂಜ್ನ ಅನ್ನು ಸಂಪರ್ಕಿಸುವ ಸೇತುವೆ ಇದಾಗಿದೆ. ಸೇತುವೆ ಕುಸಿಯುತ್ತಿರುವ ಸಂದರ್ಭ ಅದರ ಮೇಲೆ ಸಂಚರಿಸುತ್ತಿದ್ದ ಟ್ರಕ್ ಅಂಚಿನಲ್ಲಿ ನೇತಾಡುತ್ತಿದೆ. ಟ್ರಕ್ ಚಾಲಕ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೋಲ್ಕತ್ತಾದ ಸುತ್ತಮುತ್ತ ಇರುವ 20 ಸೇತುವೆಗಳ ಕಾಲಮಿತಿ ಮುಗಿದಿದೆ ಎಂದಿದ್ದಾರೆ.
ಈ ಸೇತುವೆಗಳನ್ನು ಪರಿಶೀಲನೆ ನಡೆಸಲಾಗುವುದು ಹಾಗೂ ಶೀಘ್ರ ದುರಸ್ತಿ ಮಾಡಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
Next Story