ದಿಲ್ಲಿಯ ಪ್ರಾಚೀನ ಖಿರ್ಕಿ ಮಸೀದಿ ಆವರಣದಲ್ಲಿ ಮಧ್ಯಕಾಲೀನ ಯುಗದ 254 ನಾಣ್ಯಗಳು ಪತ್ತೆ
ಹೊಸದಿಲ್ಲಿ, ಸೆ.12: ಮಧ್ಯಕಾಲೀನ ಯುಗಕ್ಕೆ ಸೇರಿದ ಸುಮಾರು 250 ನಾಣ್ಯಗಳು ದಿಲ್ಲಿಯ ಖಿರ್ಕಿ ಮಸೀದಿಯ ಆವರಣದಲ್ಲಿ ಪತ್ತೆಯಾಗಿದೆ. ಈ ನಾಣ್ಯಗಳು ಶೇರ್ ಶಾ ಸೂರಿ (1540-1545) ಮತ್ತು ಆ ನಂತರ ರಾಜರ ಕಾಲಕ್ಕೆ ಸೇರಿದ್ದು ಎನ್ನಲಾಗಿದೆ.
ಪ್ರಾಚೀನ ಕಟ್ಟಡವಾಗಿರುವ ಖಿರ್ಕಿ ಮಸೀದಿ ಆವರಣದಲ್ಲಿ ಭಾರತೀಯ ಪುರಾತತ್ವ ಇಲಾಖೆ ಸ್ವಚ್ಛತಾ ಕಾರ್ಯ ಕೈಗೊಂಡ ವೇಳೆ ನಾಣ್ಯಗಳು ಪತ್ತೆಯಾಗಿವೆ ಎನ್ನಲಾಗಿದೆ. ಮಸೀದಿಯ ಪ್ರವೇಶ ದ್ವಾರದ ಬಳಿ 254 ತಾಮ್ರದ ನಾಣ್ಯಗಳು ಕಂಡುಬಂದಿವೆ. ಫಿರೋಝ್ ಶಾ ತುಘಲಕ್ (1351-88)ನ ಪ್ರಧಾನಿಯಾಗಿದ್ದ ಖಾನ್-ಇ-ಜಹಾನ್ ಜುನಾನ್ ಶಾ ಈ ಮಸೀದಿಯನ್ನು ನಿರ್ಮಿಸಿದ್ದರು ಎಂದು ಹೇಳಲಾಗಿದೆ.
Next Story