ಮಲ್ಯ ಜೊತೆ ಜೇಟ್ಲಿ ಮಾತನಾಡಿದ್ದನ್ನು ಕಾಂಗ್ರೆಸ್ ಸಂಸದರು ನೋಡಿದ್ದಾರೆ: ರಾಹುಲ್ ಗಾಂಧಿ
“15-20 ನಿಮಿಷಗಳ ಕಾಲ ಮಾತುಕತೆ ನಡೆದಿತ್ತು”
ಹೊಸದಿಲ್ಲಿ, ಸೆ.13: ಬ್ರಿಟನ್ ಗೆ ತೆರಳುವ 2 ದಿನಗಳ ಮೊದಲು ಉದ್ಯಮಿ ವಿಜಯ್ ಮಲ್ಯ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತುಕತೆ ನಡೆಸಿದ್ದನ್ನು ಕಾಂಗ್ರೆಸ್ ನಾಯಕರೊಬ್ಬರು ನೋಡಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ಅರುಣ್ ಜೇಟ್ಲಿ ಸುಳ್ಳು ಹೇಳುತ್ತಿದ್ದಾರೆ. ವಿಜಯ್ ಮಲ್ಯರೊಂದಿಗೆ ಅವರು ಮಾತನಾಡಿದ್ದನ್ನು ಕಾಂಗ್ರೆಸ್ ನಾಯಕ ಪಿ.ಎಲ್. ಪುನಿಯಾ ನೋಡಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಸುಮಾರು 15ರಿಂದ 20 ನಿಮಿಷಗಳವರೆಗೆ ಮಾತುಕತೆ ನಡೆದಿತ್ತು. ಆರೋಪಿಯೊಬ್ಬನ ಜೊತೆ ಮಾತುಕತೆ ನಡೆಸಿದ್ದು ಯಾಕೆ?, ಆರೋಪಿಯ ಜೊತೆ ಸೇರಿದ್ದು ಯಾಕೆ? ಮತ್ತು ಏನೆಲ್ಲಾ ಚರ್ಚೆ ನಡೆಯಿತು ಎಂದು ಹಣಕಾಸು ಸಚಿವರು ದೇಶಕ್ಕೆ ವಿವರಿಸಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ.
Next Story