10 ಲಕ್ಷ ರೂ. ಲಂಚ ಪಡೆದ ಆರೋಪ: ಆಯುಷ್ ಸಚಿವಾಲಯದ ಅಧಿಕಾರಿಯ ಬಂಧನ
ಹೊಸದಿಲ್ಲಿ, ಸೆ.14: ವ್ಯಕ್ತಿಯೋರ್ವನ ಬಾಕಿಯಿದ್ದ ಬಿಲ್ಗಳನ್ನು ಪಾವತಿಸಲು 10 ಲ.ರೂ.ಗಳ ಲಂಚವನ್ನು ಸ್ವೀಕರಿಸುತ್ತಿದ್ದ ಕೇಂದ್ರ ಆಯುಷ್ ಸಚಿವಾಲಯದ ಅಧೀನ ಕಾರ್ಯದರ್ಶಿ ಆರ್.ಕೆ.ಖತ್ರಿ ಅವರು ಶುಕ್ರವಾರ ಸಿಬಿಐ ಬಲೆಗೆ ಬಿದ್ದಿದ್ದಾರೆ.
ಸಚಿವಾಲಯದ ಅಧೀನದಲ್ಲಿರುವ ಇಂಡಿಯನ್ ಮೆಡಿಸಿನ್ ಆ್ಯಂಡ್ ಫಾರ್ಮಸ್ಯೂಟಿಕಲ್ ಕಾರ್ಪೊರೇಷನ್ನ ಆಡಳಿತ ನಿರ್ದೇಶಕರ ಹೆಚ್ಚುವರಿ ಅಧಿಕಾರ ಹೊಂದಿರುವ ಖತ್ರಿ ಅವರನ್ನು ಕ್ಲಿಯರಿಂಗ್ ಮತ್ತು ಫಾರವರ್ಡಿಂಗ್ ಏಜೆಂಟ್ವೋರ್ವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಿಬಿಐ ಖತ್ರಿಯವರ ಕಚೇರಿ ಮತ್ತು ನಿವಾಸದಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಿದೆ.
Next Story