ಡೆಹ್ರಾಡೂನ್: ಸಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ತಡವಾಗಿ ಬೆಳಕಿಗೆ ಬಂದ ಪ್ರಕರಣ
ಡೆಹ್ರಾಡೂನ್, ಸೆ.18: ಡೆಹ್ರಾಡೂನ್ನ ವಸತಿ ಶಾಲೆಯಲ್ಲಿ ನಾಲ್ವರು ಸಹ ವಿದ್ಯಾರ್ಥಿಗಳು 16ರ ಹರೆಯದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದಿರುವ ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಡೆಹ್ರಾಡೂನ್ನ ಹಿರಿಯ ಎಸ್ಪಿ ನಿವೇದಿತಾ ಕುರೆಟಿ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಗ್ಯಾಂಗ್ರೇಪ್ನಲ್ಲಿ ಭಾಗಿಯಾಗಿರುವ 17 ವರ್ಷದ ಎಲ್ಲ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಅತ್ಯಾಚಾರಕ್ಕೀಡಾದ ಬಾಲಕಿ ಹೊರ ರಾಜ್ಯದವಳು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯತ್ಯದ ಸಾಕ್ಷ ನಾಶಪಡಿಸಿದ ಆರೋಪದಲ್ಲಿ ಶಾಲಾ ನಿರ್ದೇಶಕ, ಪ್ರಾಂಶುಪಾಲ, ಆಡಳಿತಾಧಿಕಾರಿ, ಆತನ ಪತ್ನಿ ಹಾಗೂ ಹಾಸ್ಟೆಲ್ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ. ಗ್ಯಾಂಗ್ರೇಪ್ ಹಾಗೂ ಸಾಕ್ಷ ನಾಶ ಪ್ರಕರಣಕ್ಕೆ ಸಂಬಂಧಿಸಿ ಐಪಿಸಿ ಹಾಗೂ ಪೋಸ್ಕೋ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ.
Next Story