ಶೇರು ಮಾರುಕಟ್ಟೆ ಕುಸಿತ: ಎರಡು ದಿನಗಳಲ್ಲಿ ಹೂಡಿಕೆದಾರರಿಗೆ 2.72 ಲಕ್ಷ ಕೋಟಿ ರೂ. ನಷ್ಟ
ಹೊಸದಿಲ್ಲಿ, ಸೆ.18: ಜಾಗತಿಕ ವ್ಯಾಪಾರ ಸಮರ ಮತ್ತು ಕಚ್ಚತೈಲ ಬೆಲೆ ಏರಿಕೆಯ ಬಿಸಿಯು ಶೇರು ಮಾರುಕಟ್ಟೆಗೂ ಬಡಿದಿದ್ದು ಕಳೆದ ಎರಡು ದಿನಗಳಲ್ಲಿ ಬಿಎಸ್ಇ ಸೆನ್ಸೆಕ್ಸ್ 800 ಅಂಕಗಳ ಕುಸಿತ ಕಾಣುವ ಮೂಲಕ ಹೂಡಿಕೆದಾರರು 2.72 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಸೋಮವಾರ 505.13 ಅಂಕಗಳನ್ನು ಕಳೆದುಕೊಂಡಿದ್ದ ಸೆನ್ಸೆಕ್ಸ್ ಮಂಗಳವಾರ ಮತ್ತಷ್ಟು ಕುಸಿದು 295 ಅಂಕಗಳನ್ನು ಕಳೆದುಕೊಂಡು 37,290.67ಕ್ಕೆ ದಿನದ ವಹಿವಾಟನ್ನು ಕೊನೆಗೊಳಿಸಿತು.
ಶೇರುಗಳಲ್ಲಿ ಉಂಟಾದ ತೀವ್ರ ಕುಸಿತದಿಂದ ಬಿಎಸ್ಇ ನೋಂದಾಯಿತ ಕಂಪೆನಿಗಳ ಮಾರುಕಟ್ಟೆ ಪಾಲು ಕಳೆದ ಶುಕ್ರವಾರದಿಂದ 2,72,549.15 ಕೋಟಿ ರೂ.ನಿಂದ 1,53,64,470 ಕೋಟಿ ರೂ.ಗೆ ತಲುಪಿದೆ.
Next Story