ಏಶ್ಯಕಪ್: ಭಾರತ ವಿರುದ್ಧ ಹಾಂಕಾಂಗ್ ವಿಕೆಟ್ ನಷ್ಟವಿಲ್ಲದೆ 150
ದುಬೈ, ಸೆ.18: ಭಾರತ ವಿರುದ್ಧ ಏಶ್ಯಕಪ್ ಪಂದ್ಯ ಗೆಲ್ಲಲು 286 ರನ್ ಗುರಿ ಪಡೆದ ಹಾಂಕಾಂಗ್ ತಂಡ 31 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 150 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ನಾಯಕ ಅಂಶುಮಾನ್ ರಾತ್ ಹಾಗೂ ನಿಝಾಕತ್ ಖಾನ್ ಅರ್ಧಶತಕ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.
ಆರಂಭಿಕ ಆಟಗಾರ ಖಾನ್ ಕೇವಲ 45 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಖಾನ್ 79(105 ಎಸೆತ, 11 ಬೌಂಡರಿ, 1 ಸಿಕ್ಸರ್) ಹಾಗೂ ಅಂಶುಮಾನ್ 57 ರನ್(82 ಎಸೆತ, 3 ಬೌಂಡರಿ)ಗಳಿಸಿ ತಂಡವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ.
ಭಾರತ ಆರು ಬೌಲರ್ಗಳನ್ನು ದಾಳಿಗಿಳಿಸಿದರೂ ಪಾಕ್ ಹಾಗೂ ಭಾರತ ಮೂಲದ ಖಾನ್ ಹಾಗೂ ರಾತ್ರನ್ನು ಬೇರ್ಪಡಿಸಲು ಸಾಧ್ಯವಾಗಿಲ್ಲ.
Next Story