ಬೇಹುಗಾರಿಕೆ ಆರೋಪದಲ್ಲಿ ಬಿಎಸ್ ಎಫ್ ಯೋಧನ ಬಂಧನ
ಪಾಕ್ ಐಎಸ್ ಐನಿಂದ ಹನಿಟ್ರ್ಯಾಪ್ ಗೊಳಗಾದ ಶಂಕೆ
ಹೊಸದಿಲ್ಲಿ, ಸೆ.19: ಫೇಸ್ ಬುಕ್ ಮೂಲಕ ಪಾಕಿಸ್ತಾನದ ಐಎಸ್ ಐನಿಂದ ಹನಿಟ್ರ್ಯಾಪ್ ಗೊಳಗಾಗಿದ್ದಾನೆ ಎನ್ನಲಾದ ಬಿಎಸ್ ಎಫ್ ಯೋಧನೊಬ್ಬನನ್ನು ಬೇಹುಗಾರಿಕೆ ಆರೋಪದಲ್ಲಿ ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ.
ರಾಷ್ಟ್ರ ರಾಜಧಾನಿ ಸಮೀಪದ ನೋಯ್ಡಾದಿಂದ ಆರೋಪಿ ಬಿಎಸ್ ಎಫ್ ಯೋಧನನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಒ.ಪಿ. ಸಿಂಗ್ ಹೇಳಿದ್ದಾರೆ.
ಬಂಧಿತ ಯೋಧನನ್ನು ಕಾನ್ ಸ್ಟೇಬಲ್ ಅಚ್ಯುತಾನಂದ ಮಿಶ್ರಾ ಎಂದು ಗುರುತಿಸಲಾಗಿದೆ. ಮಿಶ್ರಾ ಫೇಸ್ಬುಕ್ ನಲ್ಲಿ ಮಹಿಳೆಯೊಬ್ಬರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
Next Story