ಜೆಟ್ ಏರ್ ವೇಸ್ ನಲ್ಲಿ ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತಸ್ರಾವ ಸಮಸ್ಯೆ !
ಹೊಸದಿಲ್ಲಿ, ಸೆ.20: ಮುಂಬೈನಿಂದ ಜೈಪುರಕ್ಕೆ ಸಂಚರಿಸುತ್ತಿದ್ದ ಜೆಟ್ ಏರ್ ವೇಸ್ ನಲ್ಲಿ ಪ್ರಯಾಣಿಕರು ಕಿವಿ ಹಾಗೂ ಮೂಗು ರಕ್ತ ಸ್ರಾವ, ತಲೆನೋವು ಸಮಸ್ಯೆ ಎದುರಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಕ್ಯಾಬಿನ್ ಸಿಬ್ಬಂದಿ ಕ್ಯಾಬಿನ್ ಒತ್ತಡ ನಿರ್ವಹಣೆಯ ಸ್ವಿಚ್ ನ್ನು ಅದುಮಲು ಮರೆತು ಬಿಟ್ಟದ್ದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಮುಂಬೈನಿಂದ ಜೈಪುರಕ್ಕೆ ಜೆಟ್ ಏರ್ ವೇಸ್ (ಡಿ737) ವಿಮಾನದಲ್ಲಿ ಒಟ್ಟು 166 ಪ್ರಯಾಣಿಕರಿದ್ದರು. ಇವರಲ್ಲಿ 30 ಮಂದಿಗೆ ತಲೆನೋವು ಸಮಸ್ಯೆ ಕಾಣಿಸಿಕೊಂಡಿತು. ಪ್ರಯಾಣಿಕರಿಗೆ ಆ್ಯಕ್ಸಿಜನ್ ಮಾಸ್ಕ್ ನೀಡಲಾಯಿತು . ಇದರಿಂದಾಗಿ ವಿಮಾನ ಹೊರಟ ಕೆಲವೇ ಹೊತ್ತಿನಲ್ಲಿ ವಾಪಸಾಯಿತು. ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
Next Story