ವಿಜಯ ಮಲ್ಯರ 2 ಹೆಲಿಕಾಪ್ಟರ್ 8.5 ಕೋಟಿ ರೂ.ಗೆ ಹರಾಜು
ಹೊಸದಿಲ್ಲಿ, ಸೆ. 20: ಮುಚ್ಚಿದ ಕಿಂಗ್ಫಿಶರ್ ಏರ್ಲೈನ್ಸ್ನ ಎರಡು ಹೆಲಿಕಾಪ್ಟರ್ಗಳನ್ನು ಬುಧವಾರ 8.5 ಕೋ. ರೂ.ಗೆ ಹರಾಜು ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಂಗ್ಫಿಶರ್ ಏರ್ಲೈನ್ಸ್ನ ಮಾಲಕರಾಗಿರುವ ಹಾಗೂ ದೇಶದಿಂದ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಬಾಕಿ ಉಳಿಸಿರುವ ಪಾವತಿ ವಸೂಲು ಮಾಡುವ ಉದ್ದೇಶದಿಂದ ಸಾಲದಾತರು 2 ಹೆಲಿಕಾಪ್ಟರ್ಗಳನ್ನು ಹರಾಜಿಗೆ ಇರಿಸಿದ್ದರು. ಎರಡು ಹೆಲಿಕಾಪ್ಟರ್ಗಳು 8.5 ಕೋ. ರೂ.ಗೆ ಬುಧವಾರ ಹರಾಜಾಗಿದೆ ಎಂದು ಈ ಬಗೆಗಿನ ಬೆಳವಣಿಗೆ ಬಗ್ಗೆ ಅರಿವಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಲ ವಸೂಲಾತಿ ನ್ಯಾಯಾಧಿಕರಣ ನೀಡಿದ ಮಾರಾಟ ಘೋಷಣೆ ದಾಖಲೆ ಪ್ರಕಾರ ಎರಡು ಹೆಲಿಕಾಪ್ಟರ್ಗಳ ಒಟ್ಟು ಮೀಸಲು ಬೆಲೆ 3.5. ಕೋಟಿ ರೂ. ಈ ಹರಾಜನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಹರಾಜಿನಲ್ಲಿ ತಾನು ಜಯಶಾಲಿ ಬಿಡ್ಡರ್ ಆಗಿ ಹೊರಹೊಮ್ಮಿರುವುದಾಗಿ ಹೊಸದಿಲ್ಲಿ ಮೂಲದ ಚೌಧುರಿ ಏವಿಯೇಶನ್ ಫೆಸಿಲಿಟೀಸ್ನ ಪ್ರತಿನಿಧಿಗಳು ಪ್ರತಿಪಾದಿಸಿದ್ದಾರೆ ಹಾಗೂ ಎರಡು ಹೆಲಿಕಾಪ್ಟರ್ಗಳಿಗೆ 8.57 ಕೋ. ರೂ. ಪಾವತಿಸಿದ್ದಾರೆ. ಸಾಲದ ಹೊರೆ ತಾಳಲಾರದೆ 2012 ಅಕ್ಟೋಬರ್ನಲ್ಲಿ ಕಿಂಗ್ಫಿಶರ್ ಏರ್ಲೈನ್ಸ್ ಅನ್ನು ಮುಚ್ಚಲಾಗಿತ್ತು.