ಉತ್ತರ ಪ್ರದೇಶದಲ್ಲಿ ನಿಗೂಢ ಜ್ವರ: ಮೃತಪಟ್ಟವರ ಸಂಖ್ಯೆ 84ಕ್ಕೆ ಏರಿಕೆ
ಬರೇಲಿ, ಸೆ.21: ಉತ್ತರ ಪ್ರದೇಶದಲ್ಲಿ ಕಳೆದ ಆರು ವಾರಗಳ ಅವಧಿಯಲ್ಲಿ ನಿಗೂಢ ಜ್ವರಕ್ಕೆ 84 ಮಂದಿ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ 6 ಜಿಲ್ಲೆಗಳಲ್ಲಿ ನಿಗೂಢ ಜ್ವರ ಕಾಣಿಸಿಕೊಂಡಿದೆ.
ಬರೇಲಿ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಾವು ಸಂಭವಿಸಿದ್ದು, 24 ಮಂದಿ ಬರೇಲಿಯಲ್ಲಿ ಮೃತಪಟ್ಟಿದ್ದಾರೆ. ಬುಡೌನ್ ಜಿಲ್ಲೆಯಲ್ಲಿ 23 ಮಂದಿ ನಿಗೂಢ ಕಾಯಿಲೆಗೆ ತುತ್ತಾಗಿದ್ದಾರೆ
ನಿಗೂಢ ಜ್ವರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರಕ್ಕೆ ಇನ್ನೊಂದು ಸವಾಲು ಎದುರಾಗಿದೆ.
Next Story