ವಿಡಿಯೋ ಮೂಲಕ ರಾಜೀನಾಮೆ ಘೋಷಿಸುತ್ತಿರುವ ಪೊಲೀಸರು
ಶ್ರೀನಗರ: ಉಗ್ರರಿಂದ ಪೊಲೀಸರ ಅಪಹರಣ, ಹತ್ಯೆ
ಶ್ರೀನಗರ, ಸೆ.21: ಮೂವರು ಪೊಲೀಸರನ್ನು ಅಪಹರಿಸಿ ಬರ್ಬರವಾಗಿ ಹತ್ಯೆಗೈದ ನಂತರ ಇಲ್ಲಿನ 6 ಪೊಲೀಸರು ತಾವು ಸೇವೆಗೆ ರಾಜೀನಾಮೆ ನೀಡುತ್ತಿರುವುದಾಗಿ ವಿಡಿಯೋಗಳಲ್ಲಿ ಘೋಷಿಸಿದ್ದಾರೆ. ಈ ಹತ್ಯೆಗಳಿಗೂ ಮೊದಲು ಹಿಝ್ಬುಲ್ ಮುಜಾಹಿದೀನ್ ಉಗ್ರರು ‘ರಾಜೀನಾಮೆ’ ಅಥವಾ ‘ಸಾವು’ ಎಂಬ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು.
ಮೂವರು ಪೊಲೀಸರನ್ನು ಅವರ ಮನೆಯಿಂದಲೇ ಉಗ್ರರು ಎಳೆದೊಯ್ದು ಹತ್ಯೆಗೈದಿದ್ದರು. ಇದಾದ ನಂತರ 6 ಪೊಲೀಸರು ತಾವು ರಾಜೀನಾಮೆ ನೀಡುತ್ತಿರುವುದಾಗಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
“ನನ್ನ ಹೆಸರು ನವಾಝ್ ಅಹ್ಮದ್ ಲೋನ್, ಕುಲ್ಗಾಮ್ ನಿವಾಸಿ. ನಾನು ಇಂದು ನನ್ನ ಸೇವೆಗೆ ರಾಜೀನಾಮೆ ನೀಡುತ್ತಿದ್ದೇನೆ. ಯಾವುದೇ ಒತ್ತಡದಿಂದ ಈ ನಿರ್ಧಾರ ಕೈಗೊಂಡಿಲ್ಲ” ಎಂದು ಒಬ್ಬರು ಘೋಷಿಸಿದ್ದಾರೆ.
Next Story