ಮೇವು ತುಂಡರಿಸುವ ಯಂತ್ರಕ್ಕೆ ಸಿಲುಕಿದ ಸೀರೆ: ಮಹಿಳೆಯ ಶಿರಚ್ಛೇದ
ಎಟಾಹ್ (ಉತ್ತರಪ್ರದೇಶ), ಸೆ. 24: ಉತ್ತರಪ್ರದೇಶದ ಎಟಾಹ್ ಜಿಲ್ಲೆಯ ಬದರಿಯಾ ಗ್ರಾಮದಲ್ಲಿ ಮೇವು ತುಂಡರಿಸುವ ಯಂತ್ರಕ್ಕೆ ಉಡುಪು ಸಿಲುಕಿಕೊಂಡ ಪರಿಣಾಮವಾಗಿ 35 ವರ್ಷದ ಮಹಿಳೆಯ ರುಂಡ ಛೇದನವಾದ ಘಟನೆ ಸೋಮವಾರ ನಡೆದಿದೆ. ಮೇವು ತುಂಡರಿಸುವ ಯಂತ್ರಕ್ಕೆ ಸಿಲುಕಿ ಮೃತಪಟ್ಟ ಮಹಿಳೆಯನ್ನು ರುಕ್ಮಾ ದೇವಿ ಎಂದು ಗುರುತಿಸಲಾಗಿದೆ. ರುಕ್ಮಾ ದೇವಿಯ ಉಡುಪು ಮೇವು ಕತ್ತರಿಸುವ ಯಂತ್ರಕ್ಕೆ ಆಕಸ್ಮಿಕವಾಗಿ ಸಿಲುಕಿಕೊಂಡಿತ್ತು. ಇದರಿಂದ ಅವರ ತಲೆ ಯಂತ್ರಕ್ಕೆ ಸಿಲುಕಿ ತುಂಡಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story