ಸಿಬಿಎಸ್ಇ ಟಾಪರ್ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿಗಳು ಪೊಲೀಸ್ ಕಸ್ಟಡಿಗೆ
ಚಂಡೀಗಢ, ಸೆ.24: ಸಿಬಿಎಸ್ಇ ಟಾಪರ್ ಆಗಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ಪ್ರಮುಖ ಆರೋಪಿಗಳಿಗೆ ಹರ್ಯಾಣದ ನ್ಯಾಯಾಲಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಪಂಕಜ್ ಹಾಗೂ ಮನೀಶ್ರನ್ನು 11 ದಿನಗಳ ಬಳಿಕ ಮಹೇಂದ್ರಗಢ ಜಿಲ್ಲೆಯ ಸತ್ನಾಲಿ ಎಂಬಲ್ಲಿಂದ ಹರ್ಯಾಣ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ಬಂಧಿಸಿತ್ತು. ಪಂಕಜ್ ಭಾರತೀಯ ಸೇನೆಯ ಯೋಧನಾಗಿದ್ದಾನೆ.
Next Story