ಮೊಬೈಲ್ ಚಾರ್ಜ್ ಇಡಲು ವಿಮಾನದ ಕಾಕ್ಪಿಟ್ನೊಳಗೆ ಪ್ರವೇಶಿಸಲೆತ್ನಿಸಿದ ಪ್ರಯಾಣಿಕ!
ಮುಂಬೈ, ಸೆ.26: ಮುಂಬೈ-ಕೋಲ್ಕತಾದ ಇಂಡಿಗೊ ವಿಮಾನದಲ್ಲಿ ಪ್ರಯಾಣಿಕನೊಬ್ಬ ತನ್ನ ಮೊಬೈಲ್ನ್ನು ಚಾರ್ಜ್ಗೆ ಇಡಲು ವಿಮಾನದ ಕಾಕ್ಪಿಟ್ನೊಳಗೆ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ.
ಘಟನೆಯ ಬಳಿಕ ವಿಮಾನದ ಭದ್ರತಾ ಸಿಬ್ಬಂದಿಗಳು ಕಾನೂನು ಕ್ರಮ ಕೈಗೊಳ್ಳಲು ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿ ಮುಂಬೈ ಏರ್ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ದರು. ಪೊಲೀಸರು ಪ್ರಯಾಣಿಕನನ್ನು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.
‘‘ಇಂಡಿಗೋ ವಿಮಾನವು ಹೊರಡಲು ತಯಾರಾಗಿದ್ದಾಗ ತನ್ನ ಮೊಬೈಲ್ಗೆ ಚಾರ್ಜ್ ಅಗತ್ಯವಿದೆ ಎಂದು ಹೇಳಿಕೊಂಡು ಪ್ರಯಾಣಿಕನೊಬ್ಬ ಕಾಕ್ಪಿಟ್ನೊಳಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಮುಂಬೈಯಿಂದ ಕೋಲ್ಕತ್ತಾಕ್ಕೆ ಹೊರಟಿದ್ದ 6 ಇ-395 ವಿಮಾನದ ಕ್ಯಾಪ್ಟನ್ ಭದ್ರತಾ ನಿಯಮ ಉಲ್ಲಂಘನೆಯ ಆಧಾರದಲ್ಲಿ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ. ನಿಯಮದ ಪ್ರಕಾರ ಕಾಕ್ಪಿಟ್ನೊಳಗೆ ಪ್ರವೇಶ ನಿಷಿದ್ಧ’’ ಎಂದು ಏರ್ಲೈನ್ಸ್ ತಿಳಿಸಿದೆ.
Next Story