ಎಟಿಎಂ ವಿತ್ ಡ್ರಾ ಮಿತಿಯನ್ನು ಕಡಿತಗೊಳಿಸಿದ ಎಸ್ ಬಿಐ
ಮುಂಬೈ, ಅ.1: ವಂಚನೆ ಮುನ್ನೆಚ್ಚರಿಕೆ ಕ್ರಮದ ಕಾರಣ ನೀಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿದಿನದ ಎಟಿಎಂ ವಿತ್ ಡ್ರಾ ಮಿತಿಯನ್ನು 20 ಸಾವಿರ ರೂ.ಗಳಿಗೆ ಇಳಿಸಿದೆ. ಬ್ಯಾಂಕ್ ನ ಕ್ಲಾಸಿಕ್ ಮತ್ತು ಮ್ಯಾಸ್ಟ್ರೋ ಕಾರ್ಡ್ ಬಳಕೆದಾರರು ಸದ್ಯ ಪ್ರತಿದಿನ 40 ಸಾವಿರ ರೂ. ವಿತ್ ಡ್ರಾ ಮಾಡಬಹುದಾಗಿದೆ.
“ಎಟಿಎಂಗಳಲ್ಲಿ ವಂಚನಾ ವಹಿವಾಟುಗಳ ಬಗ್ಗೆ ಬ್ಯಾಂಕ್ ಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತು ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲು ಡೆಬಿಟ್ ಕಾರ್ಡ್ ಗಳ ವಿತ್ ಡ್ರಾ ಮಿತಿಯನ್ನು ಕಡಿಮೆಗೊಳಿಸಲಾಗಿದೆ” ಎಂದು ಬ್ಯಾಂಕ್ ಪ್ರಕಟನೆಯಲ್ಲಿ ತಿಳಿಸಿದೆ.
Next Story