ಸೆಕ್ಸ್ ನಿರಾಕರಿಸಿದ ಬಾಲಕನನ್ನು ಮಹಿಳೆ ಶಿಕ್ಷಿಸಿದ್ದು ಹೇಗೆ ಗೊತ್ತೇ?
ನೋಯ್ಡ, ಅ.10: ಸೆಕ್ಸ್ ನಿರಾಕರಿಸಿದ ಬಾಲಕನೊಬ್ಬನ ಶಿಶ್ನಕ್ಕೆ ಮಹಿಳೆಯೊಬ್ಬಳು ಬಿಸಿ ಇಕ್ಕುಳದಿಂದ ಗಾಯಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.
ಬಾಲಕನನ್ನು ಮನೆಗೆ ಕರೆಸಿಕೊಂಡ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ಅದಕ್ಕೆ ಬಾಲಕ ಒಪ್ಪದಿದ್ದಾಗ ಬಿಸಿ ಚಿಮಟಿಯಿಂದ ಘಾಸಿಗೊಳಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾದಲಪುರ ಠಾಣಾ ವ್ಯಾಪ್ತಿಯ ಚಪ್ರೌಲಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ತಲೆ ಮರೆಸಿಕೊಂಡಿದ್ದಾಳೆ.
ನೆರೆಮನೆಯ ಮಹಿಳೆಯ ವಿರುದ್ಧ 13 ವರ್ಷದ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. "ಕಳೆದ ಶುಕ್ರವಾರ ಸಂಜೆ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ 30ರ ಆಸುಪಾಸಿನ ಈ ಮಹಿಳೆ ಬಾಲಕನನ್ನು ಉಪಾಯವಾಗಿ ಮನೆಗೆ ಕರೆಸಿಕೊಂಡಿದ್ದಾಳೆ" ಎಂದು ತಾಯಿ ದೂರಿನಲ್ಲಿ ಹೇಳಿದ್ದಾರೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಘಾಸಿ ಮಾಡುವುದು) 324 (ಶಸ್ತ್ರದಿಂದ ಗಾಯಗೊಳಿಸುವುದು), 342 (ಅಕ್ರಮ ಬಂಧನ), 363 (ಅಪಹರಣ) ಹಾಗೂ 506 (ಅಪರಾಧ ಪಿತೂರಿ) ಅನ್ವಯ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಪೊಕ್ಸೊ ಕಾಯ್ದೆಯ ಸೆಕ್ಷನ್ಗಳ ಅನ್ವಯವೂ ದೂರು ದಾಖಲಾಗಿದೆ.
"ಪೊಲೀಸರು ಪ್ರಕರಣದ ಬಗ್ಗೆ ಎಲ್ಲ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ತಡವಾಗಿ ದೂರು ನೀಡಿರುವುದು ಹಲವು ಉತ್ತರ ಸಿಗದ ಪ್ರಶ್ನೆಗಳನ್ನು ಹುಟ್ಟುಹಾಕಿದೆ" ಎಂದು ಪೊಲೀಸರು ಹೇಳಿದ್ದಾರೆ.