ಕ್ಯಾಶಿಯರ್ ಗೆ ಗುಂಡಿಕ್ಕಿ ಬ್ಯಾಂಕ್ ನಿಂದ 3 ಲಕ್ಷ ರೂ. ದೋಚಿದ ದರೋಡೆಕೋರರು
ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಹೊಸದಿಲ್ಲಿ, ಅ.13: ಮುಸುಕು ಹಾಕಿಕೊಂಡಿದ್ದ 6 ಶಸ್ತ್ರಧಾರಿ ದರೋಡೆಕೋರರು ಬ್ಯಾಂಕ್ ಒಂದಕ್ಕೆ ನುಗ್ಗಿ ಕ್ಯಾಶಿಯರ್ ಗೆ ಗುಂಡಿಕ್ಕಿ 3 ಲಕ್ಷ ರೂ. ದೋಚಿರುವ ಘಟನೆ ದಿಲ್ಲಿಯ ಛವ್ಲಾದ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ನಡೆದಿದೆ. ದರೋಡೆಕೋರರ ಕೃತ್ಯ ಬ್ಯಾಂಕ್ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭದ್ರತಾ ಸಿಬ್ಬಂದಿಯಿಂದ ಬಂದೂಕು ಕಿತ್ತುಕೊಂಡು ಆತನಿಗೆ ಹಲ್ಲೆ ನಡೆಸುವ ದರೋಡೆಕೋರರು ಬ್ಯಾಂಕ್ ಕ್ಯಾಶಿಯರ್ ಗೆ ಗುಂಡಿಕ್ಕುತ್ತಾರೆ. ನಂತರ ದೋಚಿದ ಹಣದೊಂದಿಗೆ ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
10 ಮಂದಿ ಗ್ರಾಹಕರು ಮತ್ತು 6 ಬ್ಯಾಂಕ್ ಸಿಬ್ಬಂದಿಯನ್ನು ದರೋಡೆಕೋರರು ಬಂದೂಕು ತೋರಿಸಿ ಬೆದರಿಸಿದ್ದರು. ಬ್ಯಾಂಕ್ ಕ್ಯಾಶಿಯರ್ ನಿಂದ ಹಣ ದೋಚಲು ದರೋಡೆಕೋರರು ಯತ್ನಿಸಿದ್ದು, ಕ್ಯಾಶಿಯರ್ ಹಣ ನೀಡಲು ನಿರಾಕರಿಸಿದ್ದರು. ಈ ಸಂದರ್ಭ ಗುಂಡಿಕ್ಕಲಾಗಿದೆ. ದರೋಡೆಕೋರರು ಪರಾರಿಯಾದ ಮೇಲೆ ಕ್ಯಾಶಿಯರ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
#WATCH: CCTV footage of a corporation bank being robbed in Delhi's Khaira yesterday by armed assailants. Cashier was shot dead. Investigation underway. pic.twitter.com/4XSz1JX8AF
— ANI (@ANI) October 13, 2018