ಮಾಡೆಲ್ ಆಕಾಂಕ್ಷಿಯ ಹತ್ಯೆ: ವಿದ್ಯಾರ್ಥಿಯ ಬಂಧನ
ಮುಂಬೈ, ಅ. 16: ಮಾಡೆಲ್ ಆಕಾಂಕ್ಷಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ ಮೂಲದ ಅಂಧೇರಿ (ಪಶ್ಚಿಮ) ಮಿಲ್ಲತ್ ನಗರದಲ್ಲಿ ವಾಸಿಸುತ್ತಿರುವ 19 ವರ್ಷದ ಕಾಲೇಜು ವಿದ್ಯಾರ್ಥಿ ಮುಝಮ್ಮಿಲ್ ಸೈಯದ್ ನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮಾಡೆಲ್ ಆಕಾಂಕ್ಷಿ ಮಾನಸಿ ದೀಕ್ಷಿತ್ (20) ಅವರ ಮೃತದೇಹ ಇದ್ದ ಸೂಟ್ಕೇಸ್ ಸೋಮವಾರ ಮಲಾಡ್ ಉಪನಗರದಲ್ಲಿ ಪತ್ತೆಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಒಂದು ಗಂಟೆಯಲ್ಲಿ ಆರೋಪಿ ಮುಝಮ್ಮಿಲ್ ಸೈಯದ್ ನನ್ನು ಬಂಧಿಸಿದ್ದಾರೆ. ರಾಜಸ್ಥಾನದ ಕೋಟದವರಾದ ಮಾನಸಿ ದೀಕ್ಷಿತ್ ಅವರು ತನ್ನ ಮಾಡೆಲ್ ಆಗುವ ಕನಸು ಹೊತ್ತು ಮುಂಬೈಗೆ ಬಂದಿದ್ದರು. ಇಬ್ಬರ ನಡುವೆ ವಾಗ್ವಾದ ನಡೆದ ಬಳಿಕ ಸ್ಟೂಲ್ನಲ್ಲಿ ಹೊಡೆದು ತಾನು ಮಾನಸಿಯನ್ನು ಹತ್ಯೆಗೈದೆ ಎಂದು ಮುಝಾಮಿಲ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story