93ನೆ ಹುಟ್ಟುಹಬ್ಬದ ದಿನ ಉತ್ತರಾಖಂಡದ ಮಾಜಿ ಸಿಎಂ ಎನ್.ಡಿ. ತಿವಾರಿ ನಿಧನ
ಹೊಸದಿಲ್ಲಿ, ಅ.18: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಎನ್.ಡಿ. ತಿವಾರಿ ಇಂದು ನಿಧನರಾಗಿದ್ದಾರೆ. ಇಂದು ತಿವಾರಿಯವರ 93ನೆ ಜನ್ಮದಿನವಾಗಿತ್ತು.
“ಉತ್ತರಾಖಂಡಕ್ಕೆ ತಿವಾರಿ ಜಿ ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗದು. ಉತ್ತರಾಖಂಡಕ್ಕೆ ಹಣಕಾಸು ಹಾಗು ಕೈಗಾರಿಕಾ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು” ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ.
ಮೆದುಳಿನ ಆಘಾತಕ್ಕೆ ಒಳಗಾದ ನಂತರ ಎನ್.ಡಿ. ತಿವಾರಿಯವರನ್ನು ದಿಲ್ಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಅವರು ಅಲ್ಲೇ ನಿಧನರಾಗಿದ್ದಾರೆ.
Next Story