ಅಮೃತಸರ: ರೈಲ್ವೆ ಹಳಿ ಸಮೀಪ ಪತ್ತೆಯಾಗಿದ್ದ ಮಗು ಮತ್ತೆ ತಾಯಿ ಮಡಿಲಿಗೆ
ಅಮೃತಸರ, ಅ.21: ಅಮೃತಸರದಲ್ಲಿ ಶುಕ್ರವಾರ ಸಂಭವಿಸಿದ ರೈಲು ದುರಂತದ ಬಳಿಕ ರೈಲ್ವೆ ಹಳಿಯ ಸಮೀಪ ಪತ್ತೆಯಾದ 10 ತಿಂಗಳ ಗಂಡು ಮಗು ರವಿವಾರ ತಡ ರಾತ್ರಿ ತನ್ನ ತಾಯಿ ಮಡಿಲು ಸೇರಿದೆ. ಆದರೆ, ರೈಲು ದುರಂತದ ವಿಧಿಯ ಕ್ರೂರ ಆಟದಲ್ಲಿ ಮಗುವಿನ ತಂದೆ ಸಾವನ್ನಪ್ಪಿದ್ದಾರೆ.
ಮಗುವಿನ ತಲೆ ಬುರುಡೆಗೆ ಹಲವು ಗಾಯಗಳಾದ ಕಾರಣಕ್ಕೆ ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆರಂಭದಲ್ಲಿ ನಾಗರಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅನಂತರ ಗುರು ನಾನಕ್ ದೇವ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಮಗುವಿನ ಕೆಲವು ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರಂಭದಲ್ಲಿ ಮಗುವಿನ ಹೆತ್ತವರು ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ಹಲವು ದಂಪತಿ ಆಡಳಿತವನ್ನು ಸಂಪರ್ಕಿಸಿ ಮಗುವನ್ನು ದತ್ತು ತೆಗೆದುಕೊಳ್ಳುವ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಆದರೆ, ರವಿವಾರ ಮಗುವನ್ನು ವಿಶಾಲ್ ಎಂದು ಗುರುತಿಸಲಾಗಿತ್ತು ಹಾಗೂ ಅದರ ತಾಯಿ ರಾಧಿಕಾ ಅವರನ್ನು ಅಮನ್ ದೀಪ್ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಪತ್ತೆಯಾಗಿತ್ತು.
Next Story