ಬಿಹಾರದಲ್ಲಿ ಬಿಜೆಪಿ-ಜೆಡಿಯುಗೆ ಸಮಾನ ಸಂಖ್ಯೆಯ ಸೀಟುಗಳು: ನಿತೀಶ್ ಕುಮಾರ್, ಅಮಿತ್ ಶಾ ಘೋಷಣೆ
ಲೋಕಸಭಾ ಚುನಾವಣೆ
ಪಾಟ್ನಾ, ಅ.26: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಮತ್ತು ನಿತೀಶ್ ಕುಮಾರ್ ರ ಜೆಡಿಯು ಸಮಾನ ಸಂಖ್ಯೆಯ ಸೀಟುಗಳೊಂದಿಗೆ ಸ್ಪರ್ಧಿಸಲಿದೆ. ಈ ಬಗ್ಗೆ ಎರಡೂ ಪಕ್ಷಗಳು ಇಂದು ಅಧಿಕೃತ ಘೋಷಣೆ ಮಾಡಿದೆ.
ಹೊಸದಿಲ್ಲಿ ಮಾತುಕತೆ ನಡೆಸಿದ ನಂತರ ಇಬ್ಬರೂ ಈ ಬಗ್ಗೆ ಘೋಷಿಸಿದರು. “2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸಂಖ್ಯೆಯ ಸೀಟುಗಳಲ್ಲಿ ಸ್ಪರ್ಧಿಸಲಿದೆ. ಇತರ ಮಿತ್ರಪಕ್ಷಗಳಿಗೂ ಗೌರವಾನ್ವಿತ ಸೀಟು ಸಿಗಲಿದೆ. ಕೆಲ ದಿನಗಳಲ್ಲಿ ಸಂಖ್ಯೆಗಳನ್ನು ಘೋಷಿಸಲಾಗುವುದು” ಎಂದು ಅಮಿತ್ ಶಾ ಹೇಳಿದರು
ಉಪೇಂದ್ರ ಕುಶ್ವಾಹ ಮತ್ತು ರಾಮ್ ವಿಲಾಸ್ ಪಾಸ್ವಾನ್ ನಮ್ಮ ಜೊತೆ ನಿಲ್ಲಲಿದ್ದಾರೆ ಎಂದವರು ಈ ಸಂದರ್ಭ ಮಾಹಿತಿ ನೀಡಿದರು.
Next Story