ಜಾರಿ ನಿರ್ದೇಶನಾಲಯದ ನೂತನ ಮುಖ್ಯಸ್ಥರಾಗಿ ಸಂಜಯ್ ಮಿಶ್ರಾ ನೇಮಕ
ಹೊಸದಿಲ್ಲಿ, ಅ.27: ಭಾರತೀಯ ಕಂದಾಯ ಸೇವಾ ಅಧಿಕಾರಿ ಸಂಜಯ್ ಮಿಶ್ರಾ ಶನಿವಾರ ಜಾರಿ ನಿರ್ದೇಶನಾಲಯದ(ಇಡಿ) ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮಿಶ್ರಾ ಅವರಿಗೆ ಮುಂದಿನ ಮೂರು ತಿಂಗಳ ಕಾಲ ಹೆಚ್ಚುವರಿ ಜವಾಬ್ದಾರಿವಹಿಸಲಾಗಿದೆ.
ಹಾಲಿ ಇಡಿ ಮುಖ್ಯಸ್ಥರಾದ ಕರ್ನಲ್ ಸಿಂಗ್ ಶನಿವಾರ ನಿವೃತ್ತಿಯಾಗಲಿದ್ದಾರೆ. ಇವರು ಎರಡೂವರೆ ವರ್ಷಗಳ ಕಾಲ ಇಡಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ದಿಲ್ಲಿಯಲ್ಲಿ ಆದಾಯ ತೆರಿಗೆಯ ಮುಖ್ಯ ಆಯುಕ್ತರಾಗಿರುವ ಮಿಶ್ರಾ, ಎನ್ಡಿಟಿವಿ ವಿರುದ್ಧ ತನಿಖೆ ಹಾಗೂ ಗಾಂಧಿ ಕುಟುಂಬ ಒಳಗೊಂಡಿರುವ ನ್ಯಾಶನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ 'ಮಾರ್ಗದರ್ಶನ' ನೀಡಿದ್ದರು. ಅಹ್ಮದಾಬಾದ್ನಲ್ಲಿ ಸೇವೆ ಸಲ್ಲಿಸಿರುವ ಮಿಶ್ರಾ, ಗೃಹ ವ್ಯವಹಾರ ಸಚಿವಾಲಯ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಐಟಿ ಮೂಲಗಳು ತಿಳಿಸಿವೆ.
Next Story