ಸರಕಾರದ ನೆರವು ಪಡೆದೂ ಶೌಚಾಲಯ ನಿರ್ಮಿಸದ 46 ಜನರ ವಿರುದ್ಧ ಎಫ್ಐಆರ್
ಸಂಭಲ್(ಉ.ಪ್ರ),ಅ.28: ಸರಕಾರಿ ಅಧಿಕಾರಿಯೋರ್ವರ ದೂರಿನ ಮೇರೆಗೆ ಸರಕಾರದಿಂದ ಆರ್ಥಿಕ ನೆರವು ಪಡೆದುಕೊಂಡಿದ್ದರೂ ಶೌಚಾಲಯಗಳನ್ನು ನಿರ್ಮಿಸದ್ದಕ್ಕಾಗಿ ಸಂಭಲ್ ಜಿಲ್ಲೆಯ ಚಂದೌಸಿಯಲ್ಲಿ 46 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸ್ಥಳ ಪರಿಶೀಲನೆಗೆ ತೆರಳಿದ್ದ ಕಾರ್ಯಕಾರಿ ಅಧಿಕಾರಿ ಅಮಿತಾ ವರುಣ್ ಅವರು ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣಕ್ಕಾಗಿ ತಲಾ 4,000 ರೂ.ಗಳ ಸರಕಾರಿ ನೆರವು ಪಡೆದುಕೊಂಡಿದ್ದ 46 ಜನರು ಶೌಚಾಲಯಗಳನ್ನು ನಿರ್ಮಿಸದಿರುವುದು ಪತ್ತೆ ಹಚ್ಚಿದ್ದು,ಈ ಬಗ್ಗೆ ಶನಿವಾರ ದೂರು ಸಲ್ಲಿಸಿದ್ದರು.
Next Story