ಎಸ್ ಬಿಐ ಡೆಬಿಟ್ ಕಾರ್ಡ್ ಮೂಲಕ ನಗದು ವಿಥ್ ಡ್ರಾ ಮಿತಿ ಇಂದಿನಿಂದ 20 ಸಾವಿರ ರೂ .
ಹೊಸದಿಲ್ಲಿ, ಅ.31: ಪ್ರತಿನಿತ್ಯ ಕ್ಲಾಸಿಕ್ ಆ್ಯಂಡ್ ಮೆಸ್ಟ್ರೊ ಡೆಬಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು ಹಿಂಪಡೆಯುವ ಮಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ.40 ಸಾವಿರದಿಂದ ರೂ. 20 ಸಾವಿರಕ್ಕೆ ಸೀಮಿತಗೊಳಿಸಿದೆ.
ಬುಧವಾರ ಎಸ್ ಬಿಐ ನ ನಿರ್ಧಾರ ಜಾರಿಗೆ ಬಂದಿದೆ. ಎಟಿಎಂ ಮೂಲಕ ಹಣ ಪಡೆಯುವ ಮಿತಿಯನ್ನು ಬಳಕೆದಾರರು ಹೆಚ್ಚಿಸಿಕೊಳ್ಳಬೇಕಾದರೆ ಅಧಿಕ ಮಿತಿಯ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.
ದೇಶದಲ್ಲಿ ಎಟಿಎಂ ನಿಂದ ಹಣ ಕಳವು ಮತ್ತು ಮೋಸವನ್ನು ತಡೆಯಲು ಮತ್ತು ಡಿಜಿಟಲ್ ವ್ಯವಹಾರಗಳಿಗೆ ಇನ್ನಷ್ಟು ಉತ್ತೇಜನ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಸ್ಬಿಐ ತಿಳಿಸಿದೆ.
Next Story