ಮಾವೋವಾದಿಗಳಿಂದ ಬಾಂಬ್ ಸ್ಫೋಟ: ಭದ್ರತಾ ಸಿಬ್ಬಂದಿ ಸೇರಿ ಐವರು ಮೃತ್ಯು
ದಾಂತೆವಾಡ, ನ.8: ಛತ್ತೀಸ್ ಗಢದ ದಾಂತೆವಾಡದಲ್ಲಿ ಮಾವೋವಾದಿಗಳು ದಾಳಿ ನಡೆಸಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಸೇರಿ ಐವರು ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಚುನಾವಣೆ ನಡೆಯುವ ನಾಲ್ಕು ದಿನಗಳ ಮೊದಲು ಈ ಘಟನೆ ನಡೆದಿದೆ.
ಇಲ್ಲಿ ಬಚೇಲಿಯಲ್ಲಿ ಈ ಘಟನೆ ನಡೆದಿದ್ದು, ಬಾಂಬ್ ಸ್ಫೋಟದಿಂದ ಇಬ್ಬರು ಸಿಐಎಸ್ ಎಫ್ ಸಿಬ್ಬಂದಿ ಸೇರಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.
Next Story