ಛತ್ತೀಸ್ ಘಡದಲ್ಲಿ ಬಾಂಬ್ ಸ್ಪೋಟ; ನಾಲ್ವರು ಯೋಧರು, ಓರ್ವ ನಾಗರಿಕನಿಗೆ ಗಾಯ
ಛತ್ತೀಸ್ಗಡ, ನ.14: ಸುಧಾರಿತ ಸ್ಫೋಟಕ ಸಾಧನ(ಐಇಡಿ ) ಬಳಸಿ ಮಾವೋವಾದಿಗಳು ಬಾಂಬ್ ಸ್ಫೋಟಿಸಿದ ಪರಿಣಾಮವಾಗಿ ಓರ್ವ ನಾಗರಿಕ ಮತ್ತು ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡ ಘಟನೆ ಛತ್ತೀಸ್ ಘಡದ ಬಿಜಾಪುರ್ ಘಾಟಿ ಎಂಬಲ್ಲಿ ನಡೆದಿದೆ.
ಯೋಧರು ವಾಹನದಲ್ಲಿ ತೆರಳುತ್ತಿದ್ದಾಗ ಮಾವೋವಾದಿಗಳು ಬಾಂಬ್ ಸ್ಫೋಟಿಸಿದ ಪರಿಣಾಮವಾಗಿ ನಾಲ್ವರು ಬಿಎಸ್ ಎಫ್ ಯೋಧರು ಮತ್ತು ಓರ್ವ ನಾಗರಿಕ ಗಾಯಗೊಂಡರು. ನಾಗರಿಕರೊಬ್ಬರು ವಾಹನವನ್ನುಚಲಾಯಿಸಿತ್ತಿದ್ದರು ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ .
Next Story