ಮಧ್ಯಪ್ರದೇಶ ಚುನಾವಣೆ: ಬಿಜೆಪಿ ಜಾಹೀರಾತಿಗೆ ಕಾಂಗ್ರೆಸ್ ಆಕ್ಷೇಪ; ದೂರು
ಭೋಪಾಲ್, ನ.14: ಬಿಜೆಪಿ ಮಂಗಳವಾರದ ಪತ್ರಿಕೆಯಲ್ಲಿ ಪ್ರಕಟಿಸಿದ ಜಾಹೀರಾತಿನ ಬಗ್ಗೆ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ.
ಮಂಗಳವಾರದ ಪತ್ರಿಕೆಯಲ್ಲಿ ಬಿಜೆಪಿಯ ಜಾಹೀರಾತಿನಲ್ಲಿ ಅಷ್ಟಪಥಗಳ ರಸ್ತೆಯ ಚಿತ್ರವಿದೆ. ಆದರೆ ಮಧ್ಯಪ್ರದೇಶದಲ್ಲಿ ಎಲ್ಲಿಯೂ ಅಷ್ಟಪಥದ ರಸ್ತೆಯಿಲ್ಲ. ಇದು ಜನತೆಯ ದಾರಿ ತಪ್ಪಿಸುವ ಕ್ರಮವಾಗಿದೆ. ಇಂತಹ ಚಿತ್ರಗಳನ್ನು ಪ್ರಕಟಿಸುವ ಮೂಲಕ ಆಡಳಿತ ಪಕ್ಷವು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಮಧ್ಯಪ್ರದೇಶದ 230 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 28ರಂದು ಚುನಾವಣೆ ನಡೆಯಲಿದೆ.
Next Story