ಛತ್ತೀಸ್ಗಢ: ಐಇಡಿ ಸ್ಫೋಟಗೊಂಡು ಐವರು ಯೋಧರು, ಓರ್ವ ನಾಗರಿಕ ಗಾಯ
ರಾಯಪುರ, ನ. 14: ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ಐಇಡಿ (ಸುಧಾರಿತ ಸ್ಫೋಟಕ) ಬಳಸಿ ಟ್ರಕ್ ಅನ್ನು ಸ್ಪೋಟಿಸಿದ ಪರಿಣಾಮ ನಾಲ್ವರು ಗಡಿ ಭದ್ರತಾ ಪಡೆಯ ಯೋಧರು ಸಹಿತ ಐವರು ಭದ್ರತಾ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಗಾಯಗೊಂಡಿದ್ದಾರೆ.
ಬಿಜಾಪುರ ಪಟ್ಟಣದಿಂದ 7 ಕಿ. ಮೀ. ದೂರದಲ್ಲಿರುವ ಬಿಜಾಪುರ ಘಾಟಿಯಲ್ಲಿ ಬೆಳಗ್ಗೆ 9 ಗಂಟೆಗೆ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಅಧೀಕ್ಷಕ (ನಕ್ಸಲ್ ವಿರೋಧಿ ಕಾರ್ಯಾಚರಣೆ) ಸುಂದರ ರಾಜ್ ಪಿ. ಹೇಳಿದ್ದಾರೆ. ‘‘ಐಇಡಿ ಸ್ಫೋಟದಿಂದ 414 ಬೆಟಾಲಿಯನ್ಗೆ ಸೇರಿದ ಗಡಿ ಭದ್ರತಾ ಪಡೆಯ ನಾಲ್ವರು ಯೋಧರು, ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ನ ಯೋಧ ಹಾಗೂ ಓರ್ವ ವಾಹನ ಚಲಾಯಿಸುತ್ತಿದ್ದ ನಾಗರಿಕ ಗಾಯಗೊಂಡಿದ್ದಾರೆ’’ ಎಂದು ಅವರು ಹೇಳಿದ್ದಾರೆ. ಗಾಯಗೊಂಡ ಎಲ್ಲರನ್ನು ಬಿಜಾಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುಂದರ್ ರಾಜ್ ಹೇಳಿದ್ದಾರೆ.
Next Story