ರೂಪಾಯಿ ಮೌಲ್ಯವನ್ನು ಮೋದಿ ತಾಯಿಯ ವಯಸ್ಸಿಗೆ ಹೋಲಿಸಿ ವಿವಾದ ಸೃಷ್ಟಿಸಿದ ರಾಜ್ ಬಬ್ಬರ್
ಹೊಸದಿಲ್ಲಿ, ನ.23: ರೂಪಾಯಿ ಮೌಲ್ಯ ಕುಸಿತವನ್ನು ಪ್ರಧಾನಿ ಮೋದಿಯವರ ವಯಸ್ಸಿಗೆ ಹೋಲಿಸುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ವಿವಾದ ಸೃಷ್ಟಿಸಿದ್ದಾರೆ.
“ಪ್ರಧಾನಿ ಮೋದಿಯವರು ರೂಪಾಯಿ ಮೌಲ್ಯವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರ ವಯಸ್ಸಿಗೆ ಹೋಲಿಸಿದ್ದರು. ಪ್ರಧಾನಿಯವರೇ ನೀವು ಅವರ ಹೆಸರಿಗೆ ಗೌರವ ನೀಡಿಲ್ಲ. ಆದರೆ ನಮ್ಮ ಸಂಸ್ಕೃತಿ ಅದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಇಂದು ರೂಪಾಯಿ ಮೌಲ್ಯ ನಿಮ್ಮ ತಾಯಿಯ ವಯಸ್ಸಿಗೆ ಹತ್ತಿರವಾಗುತ್ತಿದೆ ಎಂದಷ್ಟೇ ನಾವು ಹೇಳಬಹುದು” ಎಂದು ಬಬ್ಬರ್ ಹೇಳಿದರು.
ರಾಜಕೀಯಕ್ಕಾಗಿ ಅಸಾಂವಿಧಾನಿಕ ಭಾಷೆ ಬಳಕೆ ಅಥವಾ ಯಾರದ್ದೇ ತಾಯಿಯನ್ನು ಎಳೆದು ತರುವುದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Next Story