ಭಾರತೀಯರಿಗೆ ನೀಡಲಾಗುವ ಬ್ರಿಟನ್ ವೀಸಾಗಳ ಸಂಖ್ಯೆಯಲ್ಲಿ ಹೆಚ್ಚಳ
ಲಂಡನ್, ನ. 29: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಗೆ ಬಂದಿರುವ (ಬ್ರೆಕ್ಸಿಟ್) ಪರಿಣಾಮವಾಗಿ ಭಾರತೀಯ ಉದ್ಯೋಗಿಗಳು, ಸಂದರ್ಶಕರು, ವಿದ್ಯಾರ್ಥಿಗಳು ಮತ್ತು ಕುಟುಂಬ ಸದಸ್ಯರಿಗೆ ನೀಡಲಾಗುತ್ತಿರುವ ವೀಸಾಗಳ ಸಂಖ್ಯೆ ಹೆಚ್ಚಿದೆ.
ಅದೇ ವೇಳೆ, ಬ್ರಿಟನ್ನಿಂದ ಹೊರಹೋಗುತ್ತಿರುವ ಐರೋಪ್ಯ ಒಕ್ಕೂಟದ ನಾಗರಿಕರ ಸಂಖ್ಯೆಯಲ್ಲಿ ಹೆಚ್ಚಾಗಿದೆ.
2018 ಸೆಪ್ಟಂಬರ್ಗೆ ಕೊನೆಯಾದ ವರ್ಷದಲ್ಲಿ ಭಾರತೀಯರಿಗೆ ಅತಿ ಹೆಚ್ಚು ಸಂಖ್ಯೆಯ ಸಂದರ್ಶಕ ವೀಸಾಗಳನ್ನು ನೀಡಲಾಗಿದೆ. ಭಾರತೀಯರಿಗೆ ನೀಡಲಾದ ವೀಸಾಗಳ ಸಂಖ್ಯೆಯು 41,224ರಿಂದ 4,68,923ಕ್ಕೆ ಏರಿದೆ.
ಬ್ರಿಟನ್ನಲ್ಲಿ ಭಾರತೀಯ ವೃತ್ತಿಪರರಿಗೆ ಬೇಡಿಕೆ ಈ ಅವಧಿಯಲ್ಲಿ ಮುಂದುವರಿದಿದೆ. ಕೌಶಲಭರಿತ ಉದ್ಯೋಗಿಗಳಿಗೆ ನೀಡಲಾಗುವ ‘ಟಯರ್ 2’ ವೀಸಾಗಳ 55 ಶೇಕಡದಷ್ಟನ್ನು ಭಾರತೀಯರಿಗೆ ನೀಡಲಾಗಿದೆ.
Next Story