ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ: 70 ವರ್ಷದ ವೃದ್ಧೆ ಮೃತ್ಯು
19 ಮಂದಿ ಆಸ್ಪತ್ರೆಗೆ ದಾಖಲು
ಮುಂಬೈ, ಡಿ.2: ಬಹುಮಹಡಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 70 ವರ್ಷದ ವೃದ್ಧೆಯೊಬ್ಬರು ಮೃತಪಟ್ಟು 19 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಮುಂಬೈಯಲ್ಲಿ ರವಿವಾರ ನಡೆದಿದೆ.
18 ಮಹಡಿಗಳ ಸಾಮ್ರಾಟ್ ಅಶೋಕ ಕಟ್ಟಡದ 3ನೆ ಮಹಡಿಯಲ್ಲಿ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ಬೆಂಕಿ ಮತ್ತು ಹೊಗೆಯಿಂದಾಗಿ ಕನಿಷ್ಠ 96 ಜನರು ತಮ್ಮ ಫ್ಲ್ಯಾಟ್ ಗಳಲ್ಲಿ ಸಿಲುಕಿದ್ದರು. ರಕ್ಷಣಾ ತಂಡ ಕೂಡಲೇ ಸ್ಥಳಕ್ಕಾಗಮಿಸಿ 50 ಜನರನ್ನು ರಕ್ಷಿಸಿತು. ರಕ್ಷಿಸಲ್ಪಟ್ಟವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಆದರೆ 70 ವರ್ಷದ ಲಕ್ಷ್ಮೀಬಾಯಿ ಚಿಕಿತ್ಸೆ ನೀಡುತ್ತಿದ್ದಾಗಲೇ ಮೃತಪಟ್ಟರು” ಎಂದವರು ತಿಳಿಸಿದ್ದಾರೆ.
Next Story