ವಿಜಯ ಮಲ್ಯಗಾಗಿ ಆರ್ಥರ್ ರೋಡ್ ಜೈಲು ಸಿದ್ಧ
ಮುಂಬೈ,ಡಿ.10: ಬ್ಯಾಂಕುಗಳಿಗೆ 9,000 ಕೋ.ರೂ.ಗೂ ಅಧಿಕ ಮೊತ್ತವನ್ನು ವಂಚಿಸಿರುವ ಆರೋಪವನ್ನು ಎದುರಿಸುತ್ತಿರುವ ಮಾಜಿ ಮದ್ಯದ ದೊರೆ ವಿಜಯ ಮಲ್ಯ ಭಾರತಕ್ಕೆ ಗಡಿಪಾರಾಗಿದ್ದು, ಅವರಿಗಾಗಿ ಮುಂಬೈನ ಅತ್ಯಂತ ದೊಡ್ಡ ಮತ್ತು ಹಳೆಯ ಜೈಲು ಆಗಿರುವ ಆರ್ಥರ್ ರೋಡ್ ಜೈಲು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಅವರಿಗಾಗಿಯೇ ಬಿಗಿಭದ್ರತೆಯ ಸೆಲ್ವೊಂದನ್ನು ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಯೋರ್ವರು ಸೋಮವಾರ ತಿಳಿಸಿದರು.
ಮಲ್ಯರ ವೈದ್ಯಕೀಯ ಅಗತ್ಯಗಳಿಗಾಗಿ ಅವರನ್ನು ಬರಾಕ್ನ ಸಮೀಪವೇ ಇರುವ ಡಿಸ್ಪೆನ್ಸರಿಗೆ ಕರೆದೊಯ್ಯಲಾಗುವುದು ಎಂದರು. ಸಾಮಾನ್ಯ ಸೆಲ್ಗಳಿಂದ ಪ್ರತ್ಯೇಕವಾಗಿರುವ ಬಿಗಿಭದ್ರತೆಯ ಸೆಲ್ಗಳು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹೊಂದಿದ್ದು,ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿಗಳು ಕಾವಲು ಕಾಯುತ್ತಿರುತ್ತಾರೆ.
Next Story