ರಾಜಸ್ಥಾನದಲ್ಲಿ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿದ ಕಾಂಗ್ರೆಸ್: ಬಿಜೆಪಿಗೆ ತೀವ್ರ ಮುಖಭಂಗ
ನಡೆಯದ ಮೋದಿ, ಅಮಿತ್ ಶಾ ಪ್ರಚಾರದ ಮ್ಯಾಜಿಕ್
#89 ಸ್ಥಾನಗಳನ್ನು ಕಳೆದುಕೊಂಡ ಕೇಸರಿ ಪಕ್ಷ
ಹೊಸದಿಲ್ಲಿ, ಡಿ.11: ತೀವ್ರ ಕುತೂಹಲ ಕೆರಳಿಸಿದ್ದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದೆ. ಈ ಮೂಲಕ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರಕಾರವೂ ತೀವ್ರ ಮುಖಭಂಗ ಅನುಭವಿಸಿದೆ.
ಕಾಂಗ್ರೆಸ್ ಮೈತ್ರಿಯು ಬಹುಮತದ 100 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ 73 ಸ್ಥಾನಗಳನ್ನಷ್ಟೇ ಗೆದ್ದಿದೆ. ಈ ಮೂಲಕ ಕೇಸರಿ ಪಕ್ಷ 89 ಸ್ಥಾನಗಳನ್ನು ಕಳೆದುಕೊಂಡಿದೆ. ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆಯು ಚುನಾವಣೆಯಲ್ಲಿ ಪ್ರತಿಫಲಿಸಿದೆ ಎಂದು ಅಭಿಪ್ರಾಯಿಸಲಾಗುತ್ತಿದ್ದು, ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಕೂಡ ವಸುಂಧರಾ ರಾಜೆ ಸರಕಾರ ಸೋಲನುಭವಿಸುತ್ತದೆ ಎಂದು ತಿಳಿಸಿತ್ತು.
ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ವಸುಂಧರಾ ರಾಜೆ, “ಕಾಂಗ್ರೆಸ್ ಗೆ ಅಭಿನಂದನೆಗಳು. ಜನರ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ” ಎಂದಿದ್ದಾರೆ.
Next Story