ವಿದೇಶಿ ಮಹಿಳೆಯ ಪುತ್ರ ದೇಶಭಕ್ತನಾಗಲು ಸಾಧ್ಯವಿಲ್ಲ: ರಾಹುಲ್ ಬಗ್ಗೆ ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ
ಹೊಸದಿಲ್ಲಿ, ಡಿ.16: “ವಿದೇಶಿ ಮಹಿಳೆಯೊಬ್ಬರಿಗೆ ಜನಿಸಿದ ಮಗು ಯಾವತ್ತಿಗೂ ದೇಶಭಕ್ತನಾಗದು. ಅದರ ಹೃದಯದಲ್ಲಿ ದೇಶದ ಹಿತಾಸಕ್ತಿ ಎಂದಿಗೂ ಇರದು” ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿಯವರ ತಾಯಿ ಸೋನಿಯಾ ಗಾಂಧಿಯವರು ಮೂಲತಃ ಇಟಲಿಯವರಾಗಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ವಿಜಯ್ ವರ್ಗಿಯ ಈ ಟ್ವೀಟ್ ಮಾಡಿದ್ದಾರೆ. ಈ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಟ್ವೀಟನ್ನು ಡಿಲಿಟ್ ಮಾಡಲಾಗಿದೆ. ಆದರೆ ಈ ಬಗ್ಗೆ ಬಿಜೆಪಿ ನಾಯಕ ಕ್ಷಮೆಯಾಚಿಸಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರರಾದ ಪ್ರಿಯಾಂಕ ಚತುರ್ವೇದಿ, “ಮಧ್ಯಪ್ರದೇಶ ಚುನಾವಣೆಯ ಸೋಲಿನ ಗಾಯ ಆಳವಾಗಿರುವುದರಿಂದ ಅವರಿಗೆ ತಕ್ಷಣ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ” ಎಂದಿದ್ದಾರೆ.
Next Story