ಪ್ರಸಿದ್ಧ ಹಾಲಿವುಡ್ ನಟ ವಿಲ್ ಸ್ಮಿತ್ ರ ‘ಡಿಫೈನಿಂಗ್ ಲವ್’ನಲ್ಲಿ ಗಾಂಧಿ-ನೆಹರೂ
ಹೊಸದಿಲ್ಲಿ, ಡಿ.16: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಇದೀಗ ಟ್ವಿಟರ್ ನಲ್ಲಿ ಹಿಂದೆಂದಿಗಿಂತಲೂ ಸಕ್ರಿಯವಾಗಿದೆ. ಮೂರು ರಾಜ್ಯಗಳ ಚುನಾವಣೆಯಲ್ಲಿ ಗೆದ್ದ ಬಳಿಕ ಅದರ ವಿಶ್ವಾಸವೂ ಹೆಚ್ಚಿದೆ. ಈ ನಡುವೆ ಹಾಲಿವುಡ್ ನ ಪ್ರಸಿದ್ಧ ನಟ ವಿಲ್ ಸ್ಮಿತ್ ಶೇರ್ ಮಾಡಿರುವ ವಿಡಿಯೋವೊಂದು ಕಾಂಗ್ರೆಸ್ ಗೆ ಖುಷಿ ತಂದಿದೆ.
ವಿಲ್ ಸ್ಮಿತ್ ಶೇರ್ ಮಾಡಿರುವ "ಡಿಫೈನಿಂಗ್ ಲವ್" ಎಂಬ ವಿಡಿಯೋದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ನೆಹರೂ ಅವರನ್ನು ತೋರಿಸಲಾಗಿತ್ತು. ವಿಲ್ ಸ್ಮಿತ್ ಅವರು ಈ ವಿಡಿಯೊಗೆ ಧ್ವನಿ ಕೂಡಾ ನೀಡಿದ್ದಾರೆ. ಪ್ರೀತಿಯನ್ನು ವ್ಯಾಖ್ಯಾನಿಸುವ ಹಲವು ದೃಶ್ಯಾವಳಿಗಳು ಇದರಲ್ಲಿದ್ದು, ಮದರ್ ಥೆರೇಸಾ ಮಕ್ಕಳ ಜತೆಗೆ ಇರುವ, ಧೋತಿ ಧರಿಸಿರುವ ಗಾಂಧಿ ಹಾಗೂ ನೆಹರೂ ಒಂದು ಕೊಠಡಿಯಲ್ಲಿ ಕುಳಿತಿರುವ ಚಿತ್ರಗಳಿವೆ. ಬಹುಶಃ ಈ ಚಿತ್ರ 1946ರ ಮುಂಬೈ ಕಾಂಗ್ರೆಸ್ ಅಧಿವೇಶನದ್ದು.
ಈ ವಿಡಿಯೊವನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದೆ. “ವಿಲ್ ಸ್ಮಿತ್ ಅವರು ನೆಹರೂ ಗಾಂಧಿ ಚಿತ್ರಗಳನ್ನು ತಮ್ಮ ವಿಡಿಯೊದಲ್ಲಿ ಸೇರಿಸಿ, ಪ್ರೀತಿಯನ್ನು ವ್ಯಾಖ್ಯಾನಿಸಿದ್ದಾರೆ?” ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಿದೆ.
How does @iWillSmith define love?
— Congress (@INCIndia) December 14, 2018
With a picture of Former PM Pt. Jawaharlal Nehru & Mahatma Gandhi in his video. https://t.co/YK7KmpjZ17