ದಲಿತ ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣ: ಇಬ್ಬರ ಸೆರೆ
ಮುಝಫ್ಫರ್ನಗರ, ಡಿ.16: ಏಳು ತಿಂಗಳ ಹಿಂದೆ ಮುಝಫ್ಫರ್ನಗರದ ಪುರ್ಕಾಝಿ ಬ್ಲಾಕ್ನ ಗ್ರಾಮದಲ್ಲಿ ನಡೆದಿದ್ದ 16ರ ಹರೆಯದ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕುಲದೀಪ್ ಮತ್ತು ಮಾಲ್ತಿ ಎಂಬ ಓರ್ವ ಮಹಿಳೆ ಬಂಧಿತ ಆರೋಪಿಗಳಾಗಿದ್ದಾರೆ.
ಕುಲದೀಪ್ ಮತ್ತು ಮಾಲ್ತಿ ತನ್ನ ಪುತ್ರಿಯನ್ನು ಅರಣ್ಯಕ್ಕೆ ಕರೆದೊಯ್ದಿದ್ದರು ಮತ್ತು ಅಲ್ಲಿ ಇನ್ನೂ ಆರು ಜನರು ಕಾಯುತ್ತಿದ್ದರು, ಎಲ್ಲರೂ ಸೇರಿ ಆಕೆಯ ಮೆಲೆ ಸಾಮೂಹಿಕ ಅತ್ಯಚಾರವೆಸಗಿ ಮನೆಯ ಹೊರಗೆ ಎಸೆದು ಹೋಗಿದ್ದರು ಎಂದು ಬಾಲಕಿಯ ತಂದೆ ದೂರಿನಲ್ಲಿ ಆಪಾದಿಸಿದ್ದರು.
ಪೊಲೀಸರು ಎಂಟು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು,ಇತರ ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಿದೆ.
Next Story