ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ರಾಜೀವ್ ಪ್ರತಾಪ್ ರೂಡಿ ಆಯ್ಕೆ
ಹೊಸದಿಲ್ಲಿ, ಡಿ.22: ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿಯವರನ್ನು ಬಿಜೆಪಿಯ ರಾಷ್ಟ್ರೀಯ ವಕ್ತಾರರನ್ನಾಗಿ ಆಯ್ಕೆ ಮಾಡಲಾಗಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ರೂಡಿಯವರನ್ನು ವಕ್ತಾರರನ್ನಾಗಿ ನೇಮಿಸಲಾಗಿ ಎಂದು ಪಕ್ಷದ ಪ್ರಕಟನೆಯೊಂದು ತಿಳಿಸಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಆರ್ ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ರ ಪತ್ನಿ ರಾಬ್ರಿ ದೇವಿಯವರನ್ನು ರೂಡಿ ಮಣಿಸಿದ್ದರು.
Next Story