“4 ವರ್ಷಗಳಲ್ಲಿ ನೀವೇನೂ ಮಾಡಿಲ್ಲ”: ರಾಜ್ ನಾಥ್ ಸಿಂಗ್ ಭಾಷಣಕ್ಕೆ ಅಡ್ಡಿಪಡಿಸಿದ ಮಹಿಳೆ
‘ಕುಳಿತುಕೊಳ್ಳಿ’ ಎಂದು ಗದರಿದ ಕೇಂದ್ರ ಸಚಿವ
ಲಕ್ನೋ, ಡಿ.26: ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಭಾಷಣ ಮಾಡುತ್ತಿದ್ದ ಸಂದರ್ಭ ಮಹಿಳೆಯೊಬ್ಬರು ‘ನೀವೇನೂ ಮಾಡಿಲ್ಲ’ ಎಂದು ಘೋಷಣೆ ಕೂಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಭಾಷಣ ಮಾಡುತ್ತಿದ್ದರು. ಈ ಸಂದರ್ಭ ಮಹಿಳೆಯೊಬ್ಬರು, “ನಾಲ್ಕು ವರ್ಷಗಳಲ್ಲಿ ನಮಗಾಗಿ ನೀವೇನೂ ಮಾಡಿಲ್ಲ. ನಮಗೆ ಮೋಸವಾಗಿದೆ” ಎಂದು ಹೇಳಿದ್ದಾರೆ.
ಭಾಷಣಕ್ಕೆ ಅಡ್ಡಿಯಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್, “ಕುಳಿತಿಕೊಳ್ಳಿ” ಎಂದು ಗದರುವ ಶೈಲಿಯಲ್ಲಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
Next Story