ಬಿಜೆಪಿ ನಾಯಕ ಶತ್ರುಘ್ನ ಸಿನ್ಹರಿಗೆ ನೀಡಲಾಗಿದ್ದ ‘ವಿಐಪಿ’ ಸೌಲಭ್ಯ ರದ್ದು
ಪಾಟ್ನ, ಜ.1: ಬಿಜೆಪಿಯ ಮುಖಂಡ ಶತ್ರುಘ್ನ ಸಿನ್ಹರಿಗೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ನೀಡಲಾಗಿದ್ದ ವಿಐಪಿ ಸೌಲಭ್ಯವನ್ನು ಹಿಂಪಡೆದಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಐಪಿ ಸ್ಥಾನಮಾನ ಹೊಂದಿದವರಿಗೆ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಮತ್ತು ಬೋರ್ಡಿಂಗ್ ಪಾಸ್ಗೆ ಕ್ಯೂ ನಿಲ್ಲುವುದರಿಂದ ವಿನಾಯಿತಿ ನೀಡಲಾಗುತ್ತದೆ.
ಇದೀಗ ಈ ಪಟ್ಟಿಯಿಂದ ಸಿನ್ಹಾ ಹೆಸರನ್ನು ಕೈ ಬಿಟ್ಟಿರುವುದಾಗಿ ಪಾಟ್ನಾದ ಜಯಪ್ರಕಾಶ್ ನಾರಾಯಣ್ ವಿಮಾನನಿಲ್ದಾಣದ ನಿರ್ದೇಶಕ ರಾಜೇಂದ್ರ ಸಿಂಗ್ ಲಹಾರಿಯಾ ತಿಳಿಸಿದ್ದಾರೆ. ಸಿನ್ಹಾರಿಗೆ ನೀಡಲಾಗಿದ್ದ ಸೌಲಭ್ಯಗಳ ಅವಧಿ ಈ ವರ್ಷದ ಜೂನ್ಗೆ ಮುಕ್ತಾಯಗೊಂಡಿದ್ದು, ಅದನ್ನು ವಿಸ್ತರಿಸುವಂತೆ ಆ ಬಳಿಕ ಯಾವುದೇ ಆದೇಶ ಬಂದಿಲ್ಲ ಎಂದು ಲಹಾರಿಯಾ ತಿಳಿಸಿದ್ದಾರೆ.
Next Story